ಹೊಂಗನಸು ಎಂಬ ಕೆಟ್ಟ ಕನಸು
ಈ ಚಿತ್ರದ ಬಗ್ಗೆ ನನಗೆ ಬಹಳ ನಿರೀಕ್ಷೆಗಳಿದ್ದವು. ಗಾಳಿಪಟಕ್ಕೆ ಟಿಕೆಟ್ ಸಿಗುವುದು ಕಷ್ಟ ಎಂದು ತಿಳಿದು, ನಾವು ಈ ಚಿತ್ರಕ್ಕೆ ನುಗ್ಗಿದೆವು. ಟಿಕೆಟ್ ಸುಲಭವಾಗಿಯೇ ಸಿಕ್ಕಿತು. ಚಿತ್ರ ಪ್ರಾರಂಭವಾಯಿತು.
ಚಿತ್ರದ ಮೊದಲ ಭಾಗವನ್ನು ನಿರ್ದೇಶಕರು ಏನೋ ತೋರಿಸುವಂತೆ ಹೋಗಿ, ನಮಗೇನೋ ಕುತೂಹಲ ಮೂಡಿಸಲು ಹೋಗಿ, ಏನನ್ನೋ ತೋರಿಸುತ್ತಾರೆ. ಚಿತ್ರದ ನಾಯಕ, ಹುಡುಗಿಗೆ ಯಾವುದೋ ಪುಸ್ತಕವನ್ನು ನೀಡುವೆ ಎಂದು ಹೇಳಿ ಕಾಟ ಕೊಡುತ್ತಾನೆ. usually ಪ್ರೇಮ ಪತ್ರ ನೀಡುವ ಪದ್ಧತಿ ಇಂದ ದೂರ ಸರಿದು ಇಲ್ಲಿ ನಾಯಕ ಒಂದು ದೊಡ್ಡ ಪುಸ್ತಕವನ್ನೆ ನೀಡುತ್ತಾನೆ. ಪುಸ್ತಕ ಓದುತ್ತಾ ಓದುತ್ತಾ ಚಿತ್ರದ ಎರಡನೇ ಭಾಗ ಪ್ರಾರಂಭವಾಗುತ್ತದೆ.
ಚಿತ್ರದ ದ್ವಿತೀಯಾರ್ಧ, ಯಾವುದೋ ಹಳೆಯ ಝಮಾನಾದ ಚಿತ್ರಗಳನ್ನು ನೋಡಿದಂತಾಗುತ್ತದೆ. ಭಾಷೆ, ಆಣೆ, child marriage… ಈ ಥರದ ಹಳೆಯ ಜಡ್ಡು ಹಿಡಿದಿರುವ concepts ಗಳನ್ನು ತೋರಿಸುವ ನಿರ್ದೇಶಕರು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಲೇ ಹೊರಡುತ್ತಾರೆ. ಬೇಡವಾದ ಬಸ್ ಖರೀದಿ, ದ್ವೇಶ, excitement ನೀಡದ ಬಸ್ fight. ನಾಯಕನ short temper, BP, ಅತಿಯಾದ ಅತ್ತಿಗೆ ವಾತ್ಸಲ್ಯ ನೋಡುಗರಾದ ನಮ್ಮನ್ನು ಚಿತ್ರ ಮಂದಿರದಿಂದ ಹೊರಬರಲು ಪ್ರೋತ್ಸಾಹಿಸುತ್ತದೆ. ಕೊನೆಗೆ ಚಿತ್ರದ ಕೊನೆಗೆ ಏನಾಗುತ್ತದೆ ಎಂದು ನೋಡಲಷ್ಟೆ ಕೂರಬೇಕು.
ಚಿತ್ರದ climax ಚೆನ್ನಾಗಿದೆ. ಆದರೆ ಅನಗತ್ಯ ತಿರುವುಗಳನ್ನು ನೀಡಿ ಪ್ರೇಕ್ಷಕರಿಗೆ ಗೋಳು ಕೊಡುತ್ತಾರೆ. ಕ್ಲೈಮ್ಯಾಕ್ಸ್ ನಲ್ಲಿ ಮೊದಲ ನಾಯಕಿ ಇಂಪನ, ನಾಯಕ ಸಂತೋಷ್ ನನ್ನು ಒಪ್ಪಿಕೊಳ್ಳಲು ಕೊಡುವ ಕಾರಣ ಇಂದಿನ ಸಂದರ್ಭದಲ್ಲಿ ಸಮರ್ಥನೀಯ ಅನಿಸುತ್ತದೆ. ನಾಯಕ ಸಂತೋಷ್ ನ ಅಣ್ಣ ನೀಡುವ ಕಾರಣವೂ ಸಮರ್ಥನೀಯ. ಜೊತೆಗೆ, ಅತ್ತಿಗೆ ದೇಶಾಂತರ ಹೊರಟು ಹೋಗುವ ನಿರ್ಧಾರವೂ ಸಮರ್ಥನೀಯ… ಆದರೆ ಸಮರ್ಥನೀಯವಾಗದ ವಿಷಯ ಎಂದರೆ, ಇಷ್ಟು ವಿಷಯವನ್ನು ಹೇಳಲು ನಿರ್ದೇಶಕರು ನಮಗೆ ಎರಡು ಘಂಟೆಗಳ ಕಾಲ ನೀಡುವ torture.
ನಿರ್ದೇಶಕ ರತ್ನಜ ಎಲ್ಲ ತಂತ್ರಜ್ನ್ಯರಿಂದಲೂ ಕೆಲಸವನ್ನು ಸರಿಯಾಗಿಯೇ ದುಡಿಸಿಕೊಂಡಿದ್ದಾರೆ. ಆದರೆ ತಮ್ಮ ಚಿತ್ರಕತೆ ಬರೆಯುವ ಕೆಲಸದಲ್ಲಿ ಸಂಪೂರ್ಣವಾಗಿ ಎಡವಿದ್ದಾರೆ. ಸಂಸ್ಕೃತಿ, ಕುಟುಂಬ, ನಂಬಿಕೆ, ಇವುಗಳನ್ನೆಲ್ಲ ನಮಗೆ ಮನದಟ್ಟು ಮಾಡಲು ಹೋಗಿ ತಲೆ ತಿನ್ನುತ್ತಾರೆ. ಹಂಸಲೇಖರ ಸಂಗೀತದಲ್ಲಿ ಎರಡು ಹಾಡುಗಳು ಮಾತ್ರ ಗಮನ ಸೆಳೆಯುತ್ತವೆ. ಊರಿಗೆಲ್ಲ ಬುದ್ಧಿ ಹೇಳುವ ಹಂಸಲೇಖ, ಹೊರಗಿನ ಗಾಯಕರನ್ನೇ ಉಪಯೋಗಿಸಿ ಒಂದು ಹಾಡಿನಲ್ಲಿ ಅಬ್ಬರದ ಸಂಗೀತ ನೀಡಿದ್ದಾರೆ. ತಮ್ಮ ಶಿಷ್ಯನ ಚಿತ್ರದಲ್ಲಾದರೂ ಹಂಸಲೇಖ ಕನ್ನಡದ ಗಾಯಕರನ್ನು ಉಪಯೋಗಿಸಬಹುದಿತ್ತು. ರಾಜೇಶ್ ಮತ್ತು ಹೇಮಂತ್ ಬಿಟ್ಟರೆ ಇನ್ನೆಲ್ಲರೂ ಹೊರ ಗಾಯಕರು!
ಛಾಯಾಗ್ರಹಣ ಸುಂದರವಾಗಿದೆ. ಆದರೆ ಎಚ್.ಎಂ.ರಾಮಚಂದ್ರರ ಕಲಾತ್ಮಕ ಮತ್ತು ಚಿನ್ನದಂತಹ ನೆನಪಿರಲಿ ದೃಶ್ಯಗಳು ಇನ್ನೂ ಕಾಡುತ್ತವೆ. ಅಂತಹ ಕಲಾತ್ಮಕ ದೃಶ್ಯಗಳು ಇಲ್ಲಿ ಕಡಿಮೆ. ರತ್ನಜ ಹಟವಾದಿ ಆಗಿರುವುದರಿಂದ, ಸಂಕಲನಕಾರರಿಗೆ ಹೆಚ್ಚು ಕೆಲಸ ನೀಡಿಲ್ಲವೇನೋ. ತಾರಾಗಣದಲ್ಲಿ ಪ್ರೇಮ್ ಬರಿ ಮುದ್ದು ಮುದ್ದಾಗಿ ಕಾಣುವುದು ಬಿಟ್ಟರೆ, ಅಂತಹ ಅಭಿನಯವೇನೂ ಇಲ್ಲ. ಹಳೆಯ ಚಿತ್ರಗಳಿಗೆ ಹೋಲಿಸಿದರೆ ಅಭಿನಯದಲ್ಲಿ ಸ್ವಲ್ಪ improvement ಇರಬಹುದು. ನಾಯಕಿ ಅಂಜಲಿ ಮೊದಲ ಚಿತ್ರದಲ್ಲೆ ಒಳ್ಳೆಯ ಅಭಿನಯ ನೀಡಿದ್ದಾರೆ.
ಪ್ರಜಾವಾಣಿಯ ವಿಮರ್ಶೆಯಲ್ಲಿ ಸಂದೀಪ ನಾಯಕ ಅವರು ಈ ಚಿತ್ರವನ್ನು ದುಃಸ್ವಪ್ನ, ದೀರ್ಗ ಧಾರಾವಾಹಿ ಎಂದೆಲ್ಲ ಕರೆದಿದ್ದಾರೆ. ಇಂತಹ ವಿಮರ್ಶೆಗಳನ್ನು ಓದಿ ರತ್ನಜ ಮತ್ತು ಅಜಯ್ ಗೌಡ ಒಂದು ಜಾಹೀರಾತನ್ನೆ ನೀಡಿದ್ದಾರೆ– ಚಿತ್ರ ಚೆನ್ನಾಗಿಯೇ ಇದೆ ಅಂತ. ಆದರೆ ಚಿತ್ರ ನಿಜವಾಗಿಯೂ ಬೋರ್ ಹೊಡೆಸುತ್ತದೆ. ಸಂದೀಪ ನಾಯಕ ಹೇಳಿದಂತೆ ದುಃಸ್ವಪ್ನವೇ ಸರಿ.
No comments yet. Be the first.
Leave a reply